Afleveringen
-
ರಾಮಾಯಣದ ಒಂದು ಸಂಧರ್ಭ ಇದು ಸೀತಾನ್ವೇಷಣೆಯಲ್ಲಿ ಶ್ರೀ ರಾಮಚಂದ್ರ ಸುಗ್ರೀವರ ಸಖ್ಯ ಆಗ್ತದೆ.. ರಾಮಚಂದ್ರ ಪ್ರಭುವಿನ ಪರಮ ಭಕ್ತ ಆಂಜನೇಯನೇ ಮೊದಲಾಗಿ ಸಾವಿರಾರು ವಾನರ ವೀರರು ಪ್ರಥ್ವಿಯ ಮೂಲೆ ಮೂಲೆಗಳಿಗೆ ಹೋಗಿ ಸೀತೆಯನ್ನ ಕಂಡು ಹಿಡಿಯಲಿಕ್ಕೆ ಪ್ರಯತ್ನಿಸುತ್ತಾರೆ .. ಆಮೇಲೇನಾಯ್ತು ?ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಒಂದಾನೊಂದು ಕಾಲದಲ್ಲಿ ಒಂದು ಬುದ್ಧ ವಿಹಾರ ಇತ್ತು. ಇಡೀ ದೇಶದಲ್ಲಿ ಹೆಸರಾಗಿದ್ದ ಮಠ ಅದು, ಆ ಮಠದ ಗುರು ಪರಮ ಜ್ಞಾನಿ ಆಗಿದ್ದ. ಇಡೀ ಮಠ ಎರಡು ಕಟ್ಟಡಗಳಲ್ಲಿತ್ತು. ಒಂದೊಂದು ವಿಭಾಗದಲ್ಲಿ ಐದುನೂರು ವಿದ್ಯಾರ್ಥಿಗಳಿದ್ರು. ಒಮ್ಮೆ ಒಂದು ಬೆಕ್ಕು ಇವರ ಮಠಕ್ಕೆ ಬಂತು ಆ ಬೆಕ್ಕು ಒಮ್ಮೆ ಒಂದು ಕಟ್ಟಡ ದಲ್ಲಿ ಇದ್ರೆ ಮತ್ತೊಂದಷ್ಟು ದಿನ ಇನ್ನೊಂದು ಕಟ್ಟಡದಲ್ಲಿರುತ್ತಿತ್ತು. ಎರಡೂ ಕಟ್ಟಡದಲ್ಲಿದ್ದವರಿಗೆ ಈ ಬೆಕ್ಕು ತಮ್ಮದಾಗಬೇಕೆಂಬ ಆಸೆ ಬಂತುಆಮೇಲೆನಾಯ್ತು?ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
Zijn er afleveringen die ontbreken?
-
ಬಹಳ ಚಂದದ ಒಂದು ಪ್ರಮೇಯ.ಧರ್ಮ ಎಂದರೇನು ಅಂತ ಯುದಿರಷ್ಟಿರ ಭೀಷ್ಮನನ್ನು ಪ್ರಶ್ನಿಸುತ್ತಾನೆ. ಪಿತಾಮಹ ರಕ್ಷಣೆಯನ್ನು ಅಪೇಕ್ಷಿಸಿ ಬಂದವರನ್ನು ಶತ್ರುವೇ ಆಗಿದ್ದರೂ ಹೇಗೆ ನಡೆಸಿಕೊಳ್ಳಬೇಕು? ಹೇಳಬಹುದೇ ಎಂದು ಕೇಳುತ್ತಾನೆ. ಅದಕ್ಕೆ ಭೀಷ್ಮರು ಒಂದು ಕಥೆ ಹೇಳುತ್ತಾರೆ ಯುಧಿಷ್ಠಿರ ಹಿಂದೆ ಭಗವಾನ್ ಪರಶುರಾಮ ಹೇಳಿದ ಕಥೆಯಿದು ಆಮೇಲೆನಾಯ್ತು?ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಒಬ್ಬ ಯುವಕನಿಗೆ ಬದುಕಿಗೆ ಅರ್ಥವಿದೆಯಾ ಎಂಬ ಅನುಮಾನ ಬಂತು ಹಾಗಾಗಿ ಆತ ತಿಳಿದವರನ್ನು ಪ್ರಶ್ನಿಸಿದ. ಆದ್ರೆ ಉತ್ತರ ಸಿಗಲಿಲ್ಲ ತನ್ನ ಊರಿನಿಂದ ಪಕ್ಕದ ಊರಿಗೂ ಹೋಗಿ ಅದೇ ಪ್ರಶ್ನೆ ಕೇಳಿದ ಅಲ್ಲೂ ಉತ್ತರ ಸಿಗಲಿಲ್ಲ ಕೊನೆಗೊಂದು ದಿನ ಒಬ್ಬ ಸಾಧು ಯುವಕನಿಗೆ ಎದುರಾದ ಆಮೇಲೆನಾಯ್ತು?ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣತಮ್ಮಂದಿರ ನಡುವೆ ಯಾವುದೊ ಕ್ಷುಲ್ಲಕ ಕಾರಣಕ್ಕೆ ವೈಮನಸ್ಸು ಬಂತು. ಒಳಗೊಳಗೇ ಕುಡಿಯುತ್ತಿದ್ದ ಅದು ಶಬ್ದಗಳಾಗಿ ವಾಕ್ಯಗಳಾಗಿ ಹೊರಬಂತು. ಅದು ಅವರಿವರ ಕಿವಿಗೆ ಬಿತ್ತು , ಕೆಲ ಹಿತೈಷಿಗಳು ಅದಕ್ಕೆ ಸ್ವಾರ್ಥದ ಉಪ್ಪು ಖಾರ ಸೇರಿಸಿ ಈ ಅಣ್ಣತಮ್ಮಂದಿರಿಗೆ ಹಿತವಚನದ ರೂಪದಲ್ಲಿ ಕಿವಿಯೂದಿದರು. ಇಬ್ಬರೂ ಅದನ್ನು ನಂಬಿದ್ರು ಆಮೇಲೇನಾಯ್ತು ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಸತ್ಸಂಗ ನಡೆಯುತ್ತಿತ್ತು ಸಂತರೊಬ್ಬರು ಬದುಕು ಹೇಗಿರಬೇಕು ಎನ್ನುವ ವಿಷಯದ ಕುರಿತು ಪ್ರವಚನ ನೀಡುತ್ತಿದ್ದರು. ಒಮ್ಮೆಲೆ ಮಕ್ಕಳ ಮಾತಿನ ಕಲರವ ಕೇಳಿಸಿತು. ಒಂದಷ್ಟು ಮಂದಿ ಮಕ್ಕಳು ನಗುತ್ತ, ಕುಣಿಯುತ್ತಾ, ಕಿರುಚಾಡುತ್ತಾ ಬಂದರು. ಎಲ್ಲರ ದೃಷ್ಟಿ ಮಕ್ಕಳತ್ತ ತಿರುಗಿತು. ಸಂತರು ಮಾತು ನಿಲ್ಲಿಸಿದ್ರು... ಆಮೇಲೆನಾಯ್ತು?
ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ತಂದೆಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಾಯಾಣ ಮಾಡ್ತಾ ಇದ್ದ, ಪ್ರಯಾಣದ ಮದ್ಯದಲ್ಲಿ ಅವನಿಗೆ ಯಾಕೋ ಏನೋ ಭಯಂಕರ ಸಿಟ್ಟು ಬಂತು.. ಗಟ್ಟಿಗಟ್ಟಿಯಾಗಿ ಬೈದು ಮಕ್ಕಳಿಗೆ ಹೊಡಿಯೋಕೆ ಶುರು ಮಾಡಿದ.. ಬಹಳಾ ಹೊತ್ತು ಹೀಗೆ ಹೊಡೆತ ಬೈಗಳು ಆಯ್ತು.. ಮಕ್ಕಳು ಮುಸು ಮುಸು ಅಳ್ತಾ ಇದ್ದ್ರು ಪಕ್ಕದಲ್ಲಿ ಪ್ರಯಾಣಿಸುತ್ತಾ ಇದ್ದ ಒಬ್ಬ ಇದನ್ನು ಗಮನಿಸ್ತಾ ಇದ್ದ.. ಆಮೇಲೇನಾಯ್ತು.. ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಬೆಟ್ಟದ ತಪ್ಪಲಿನಲ್ಲಿ ಒಬ್ಬ ಸಂತ ಮಡದಿ ಮಗನೊಂದಿಗೆ ವಾಸವಾಗಿದ್ದ. ಆರಕ್ಕೇರದೆ ಮೂರಕ್ಕಿಳಿಯದೆ ಬಂದದ್ದನ್ನು ಬಂದಹಾಗೆ ಸ್ವೀಕರಿಸುತ್ತಾ, ಎಲ್ಲವೂ ಭಗವಂತನ ದೇಣಿಗೆ, ಆಶೀರ್ವಾದ ಎಂದು ಬದುಕುತ್ತಿದ್ದ. ಒಂದು ದಿನ ಅವನ ಮನೆಯಂಗಳಕ್ಕೆ ಚಂದದ ಬಿಳಿ ಕುದುರೆಯೊಂದು ಬಂತು...ಆಮೇಲೆನಾಯ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಅತ್ಯಂತ ಕ್ರೂರಿ ಮನುಷ್ಯನೊಬ್ಬ ಇದ್ದ. ಬೇರೆಯವರಿಗೆ ಹಿಂಸೆ ಆಗೋದನ್ನು ನೋಡೋದು, ಹಿಂಸೆ ಮಾಡೋದು ಅವನಿಗೆ ತುಂಬಾ ಸಂತೋಷ ಕೊಡುತ್ತಿತ್ತು. ಒಂದು ದಿನ ಒಂದು ಜೇಡದ ಹುಳು ಅವನಿಗೆ ಅಡ್ಡ ಬಂತು. ಕಾಲಿನಿಂದ ಅದನ್ನು ಹೊಸಕಿ ಸಾಯಿಸಬೇಕು ಅದು ಪಡುವ ಸಂಕಟ ನೋಡಬೇಕು ಅನ್ನುವ ಬಯಕೆ ಆಯ್ತು ಆದ್ರೆ ....ಮುಂದೆ ಕೇಳಿ
ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಊರ ಮುಂದಿನ ತೋಪಿನಲ್ಲಿ ಮಹಾತಪಸ್ವಿ ಸಂತಾನೋರ್ವರು ಬಂದಿದ್ದಾರೆ ಅಂತ ಸುದ್ದಿ ಹರಡಿತ್ತು, ರಾಜನಾದಿಯಾಗಿ ಊರವರೆಲ್ಲಾವರನನ್ನ ಕಾಣಲಿಕ್ಕೆ, ತಮ್ಮ ತಮ್ಮ ದುಃಖ ದುಮ್ಮಾನಗಳನ್ನೆಲ್ಲಾ ಅರುಹಿ ಪರಿಹಾರ ಪಡಿಯಲಿಕ್ಕೆ ಸಾಲುಗಟ್ಟಿ ನಿಂತರು.. ಆಮೇಲೇನಾಯ್ತು ? ಕೇಳಿ ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
In this episode, Dr. Sandhya S. Pai narrates very famous Mahabharata S3 : EP - 50 : ಸಾವಿತ್ರಿ ಸತ್ಯವಾನರ ಕಥೆ |The story of Savitri Satyavanಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಸಾವಿತ್ರಿ ಸತ್ಯವಾನರ ಕಥೆ . ಹಿಂದೆ ಅಶ್ವಪತಿ ಎಂಬ ರಾಜನಿದ್ದ. ಮಕ್ಕಳಿಲ್ಲದ ಆತ ತಪಸ್ಸು ಮಾಡಿ ಮಗುವೊಂದನ್ನು ವರವಾಗಿ ಪಡೆದ. ಮುಂದೆ ಈ ಮಗು ಸಾವಿತ್ರಿಯಾಗಿ ಬೆಳೆದಳು. ಆಕೆಯ ಪತಿಯ ಸಾವು ಕಣ್ಣಮುಂದೆಯೇ ಇರುವುದನ್ನು ಕಂಡು ಆಕೆ ಏನು ಮಾಡಿದಳು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಹನುಮಂತ ಸಮುದ್ರ ದಾಟಿ ಲಂಕೆಗೆ ಬಂದು ಸೀತೆಗಾಗಿ ಹುಡುಕಾಡಿದ, ದಶ ದಿಕ್ಕುಗಳಲ್ಲಿ ಹುಡುಕಿದ.. ಎಲ್ಲಿಯೂ ಸೀತೆಯ ಸುಳಿವಿಲ್ಲ.. ಹತಾಶೆಯಿಂದ.. ತಾಯಿಯ ವಿಷಯ ತಿಳಿಯಲಿಲ್ಲ ಎಂದು ರಾಮನಲ್ಲಿ ಹೇಳುವುದು ಹೇಗೆ.. ರಾಮಚಂದ್ರನ ದುಃಖಿತ ನಿರಾಶಾ ಮುಖವನ್ನ ನೋಡೂದುಹೇಗೆ? ಅಂದುಕೊಳ್ಳುತ್ತಿರುವಾಗ ..ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಬುದ್ಧ ಒಮ್ಮೆ ಆಸಕ್ತರಿಗೆ ಪ್ರವಚನ ನೀಡುತ್ತಿದ್ದ. ಈ ಪ್ರವಚನ ಬುದ್ಧ ಕೇಳಿದ ಏಳು ಓಗಟುಗಳು ಎಂದು ಪ್ರಸಿದ್ಧಿ ಪಡೆದಿವೆ. ಮೊದಲ ಒಗಟಾಗಿ ಬುದ್ಧ ಈ ಪ್ರಶ್ನೆ ಕೇಳಿದ ಜಗತ್ತಿನಲ್ಲಿ ಅತ್ಯಂತ ಹರಿತವಾದದ್ದು ಯಾವುದು? ಶಿಷ್ಯ ವೃಂದದಲ್ಲಿ ಒಕ್ಕೊರಲಿನಿಂದ ಕೇಳಿಬಂತು ಕತ್ತಿ ಖಡ್ಗಗಳೆಂದು ಆದರೆ ಬುದ್ಧ ನಕ್ಕ ...ಯಾಕೆ?
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
In this episode, Dr. Sandhya S. Pai narrates very famous Mahabharata S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhanaವನವಾಸದಲ್ಲಿರುವ ಪಾಂಡವರಿಗೆ ಸಮಸ್ಯೆ ನೀಡುವ ಉದ್ದೇಶದಿಂದ ದುರ್ಯೋಧನನು ತನ್ನ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿ ಹಾಗೂ ಅವರ ಸಾವಿರ ಶಿಶ್ಯರನ್ನು ಸತ್ಕಾರ ಮಾಡಿ, ಬಳಿಕ ಪಾಂಡವರಿಂದಲೂ ಸತ್ಕಾರ ಸ್ವೀಕರಿಸುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಬಂದ ಇಷ್ಟು ಜನರಿಗೆ ಆಹಾರವನ್ನು ಹೇಗೆ ತಯಾರಿಸುವುದು ಎಂಬುದು ಅರ್ಥವಾಗದೆ ಇದ್ದಾಗ ಶ್ರೀ ಕೃಷ್ಣ ಏನು ಮಾಡಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಜೀವನದಲ್ಲಿ ಹತಾಶನಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ. ಸಾಯಲು ತುಂಬಾ ಇಷ್ಟ ನೋವಾಗದಂತಹ ಸುಲಭ ಉಪಾಯ ಯಾವುದಿರಬಹುದು ಅಂತ ತಿಳಿದುಕೊಳ್ಳೋದಿಕ್ಕೆ ಕೆಲವು ಸಮಯ ಹಿಡಿಯಿತು. ವಿಚಾರಿಸಿದ್ರೆ ರೈಲಿನ ಹಳಿಯ ಮೇಲಿನ ಸಾವು ಕಡಿಮೆ ತ್ರಾಸದಾಯಕ ಎಂದು ತಿಳಿಯಿತು. ರೈಲು ನಿಲ್ದಾಣಕ್ಕೆ ಬಂದ ಅಲ್ಲಿ ಜನರು ಕಿಕ್ಕಿರಿದು ನೆರೆದಿದ್ರು ಎಲ್ಲಿಗೆಹೋಗ್ತಿದ್ದಾರೆ ಅಂದ್ರೆ ಎಲ್ಲರೂ.......
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಕವಿರತ್ನ ಕಾಳಿದಾಸ ಒಂದು ಕಾಡಿನ ಮೂಲಕ ಪ್ರಯಾಣ ಮಾಡ್ತಾ ಇದ್ದ, ಬಹಳಾ ದೂರ ಕ್ರಮಿಸಿದ ನಂತರ ಅವನಿಗೆ ಬಾಯಾರಿಕೆ ಆಯ್ತು.. ಅತ್ತಿತ್ತಹುಡುಕಾಡಿದ ನೀರು ಕಾಣಲಿಲ್ಲ .. ಬಾವಿ, ಕೊಳ, ತೊರೆ ಏನೂ ಕಾಣಲಿಲ್ಲ ಆಗ ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
In this episode, Dr. Sandhya S. Pai narrates very famous Mahabharata S3 : EP - 48 : ಮಹಾಭಾರತದ ಸುಂದರ ಕಥೆಗಳಲ್ಲಿ ಇದೂ ಒಂದು. ಚಿತ್ರಸೇನನಿಂದ ಪರಾಜಿತನಾದ ದುರ್ಯೋಧನ. ದ್ವೈತ ವನದಲ್ಲಿದ್ದ ಪಾಂಡವರ ಎದುರು ಅಹಂಕಾರ ತೋರಿಸಲು ದುರ್ಯೋಧನ ಬಂದಾಗ ಗಂಧರ್ವನೋರ್ವನ ಜೊತೆ ಕಲಹವಾಯಿತು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಚೀನಾ ದೇಶದಲ್ಲಿ ಅಂತರ್ಯುದ್ಧಗಳು ನಡೀತಾ ಇದ್ದ ಕಾಲ ಫೆಂಗ್ ಎಂಬ ಹೆಸರಿನ ಯುವಕನೊಬ್ಬನಿದ್ದ, ಕಾಡು ಬಡತನದಲ್ಲಿದ್ದ , ಯಾವುದೇ ರೀತಿಯ ಸಾಂಪ್ರದಾಯಿಕ ವಿದ್ಯಾಭ್ಯಾಸ ಇಲ್ಲದ್ದರಿಂದ ಎಲ್ಲೂ ಕೆಲಸ ಸಿಕ್ತಾ ಇರಲಿಲ್ಲ.. ತುಂಬಾ ಯೋಚಿಸಿ ಪ್ರಾಂತ್ಯದ ಪಾಳೇಗಾರನ ಅರಮನೆಗೆ ಹೋದ ಅವನ ಮಿತ್ರ ಒಬ್ಬ ಈ ಪಾಳೇಗಾರನ ಅಂಗರಕ್ಷಕರಲ್ಲೊಬ್ಬನಾಗಿದ್ದ.. ಆಮೇಲೇನಾಯ್ತು ಕೇಳಿ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
ಒಂದಾನೊಂದು ಊರಿನ ರಾಜ ಬಹಳ ಬುದ್ಧಿವಂತನು ಪ್ರಜ್ಞಾವಂತನೂ ಆಗಿದ್ದ. ಬುದ್ಧಿವಂತನಾದಿದ್ದವನಿಗೆ ಪ್ರಜ್ಞವಂತಿ ಕೆಯಿಲ್ಲದಿದ್ರೆ ಬುದ್ಧಿ ಇದ್ದೂ ಪ್ರಯೋಜನವಿಲ್ಲ. ಇಂತಹ ರಾಜನ ಆಸ್ಥಾನದಲ್ಲಿದ್ದವರಿಗೆ ರಾಜನಿಗಿದ್ದ ಪ್ರಜ್ಞಾವಂತಿಕೆ ಇರಲಿಲ್ಲ. ಒಂದು ದಿನ ರಾಜನ ಆಸ್ಥಾನಕ್ಕೆ ರಾಜನಿಲ್ಲದ ಸಂದರ್ಭದಲ್ಲಿ ಒಂದು ಭೂತ ಬಂತು ಆಮೇಲೆನಾಯ್ತು.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
-
In this episode, Dr. Sandhya S. Pai narrates very famous Mahabharata S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation ಪಾಂಡವರು ದ್ವೈತ ಸರೋವರದ ಬಳಿಯಲ್ಲಿ, ಹೆಚ್ಚು ಮನುಷ್ಯ ಸಂಚಾರವಿಲ್ಲದ ಸ್ಥಳದಲ್ಲಿ ಬಿಡಾರ ಹೂಡಿದ್ರು.. ಅವರು ಅಲ್ಲಿ ಇರುವ ವಿಚಾರ ತಿಳಿದ ತಪಸ್ವಿಗಳು.. ಅವರಲ್ಲಿಗೆ ಬರ್ತಾ ಇದ್ರು.. ಹೀಗೆ ಒಂದು ದಿನ ಒಬ್ಬ ಬ್ರಾಹ್ಮಣನನ್ನ ಆದರಪೂರ್ವಕವಾಗಿ ಸತ್ಕರಿಸಿದ್ರು.. ಅವನು ಅವರ ದುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ದುಃಖಿತನಾದ ಇವರ ಕಷ್ಟದೆಸೆಯನ್ನ ದೃತರಾಷ್ಟನಿಗೆ ತಿಳಿಸಬೇಕು ಅಂತ ಸ್ವಯಂ ಪ್ರೇರಣೆಯಿಂದ ಹಸ್ತಿನಾಪುರಕ್ಕೆ ಹೊರಟಾಗ .. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
- Laat meer zien